Sunday, October 21, 2018

ಬಿಗ್ ಬಾಸ್ ಮನೆಗೆ ಕಾಮನರ್ ಆಗಿ ಮನೆ ಸೇರಲಿದ್ದಾರೆ ಕರಾವಳಿ ಚೆಂದಳ್ಳಿ ಚೆಲುವೆ


ಬಿಗ್ ಬಾಸ್ ಮನೆಗೆ ಕಾಮನರ್ ಆಗಿ ಎಂಟ್ರಿ ಕೊಡಲಿದ್ದಾರೆ ಕರಾವಳಿಯ ಈ ಚೆಂದುಳ್ಳಿ ಚೆಲುವೆ

ಕನ್ನಡದ ಬಿಗ್ ಬಾಸ್ ಹೊಸ ಸೀಸನ್ ಭಾನುವಾರದಿಂದ ಪ್ರಾರಂಭವಾಗಲಿದೆ. ಕಾರ್ಯಕ್ರಮಕ್ಕೆ ಕಿಚ್ಚು ಹಚ್ಚಲು ಕಿಚ್ಚ ಸುದೀಪ್ ಕೂಡ ಸಕಲ ಸಿದ್ಧತೆಯಲ್ಲಿದ್ದಾರೆ. ಇದರ ಬೆನ್ನಲ್ಲೇ ಈ ಬಾರಿಯ ಸ್ಪರ್ಧಿಗಳ ಕುರಿತು ಭಾರೀ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಬಿಗ್​ ಬಾಸ್​ನ ಸೀಸನ್ 5 ನಲ್ಲಿ ಸಾಮಾನ್ಯ ಜನರಿಗೂ ಅವಕಾಶ ನೀಡುವ ಪರಿಪಾಠ ಆರಂಭವಾಗಿತ್ತು. ಅದರಂತೆ ಈ ಬಾರಿ ಅರ್ಧದಷ್ಟು ಸರ್ಧಿಗಳು ಜನಸಾಮಾನ್ಯರಾಗಲಿದ್ದಾರೆ ಎಂಬ ಮಾಹಿತಿಗಳು ಹೀಗಾಗಲೇ ಹೊರಬಿದ್ದಿದೆ.

ಅದರಲ್ಲೂ ಒಂದಷ್ಟು ಸೆಲೆಬ್ರಿಟಿಗಳ ಹೆಸರುಗಳು ಬಹಿರಂಗವಾಗಿದ್ದರೂ, ಇಲ್ಲಿ ಜನ ಸಾಮಾನ್ಯ ಕೋಟಾದಲ್ಲಿ ಯಾರೂ ಎಂಟ್ರಿ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಎಲ್ಲೂ ಹೊರ ಬಿದ್ದಿರಲಿಲ್ಲ. ಇದೀಗ ಕೆಲ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಕರಾವಳಿ ಬೆಡಗಿಯೊಬ್ಬಳ ಬಿಗ್ ಬಾಸ್ ಎಂಟ್ರಿ ಪಕ್ಕಾ ಎನ್ನಲಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಪ್ರತಿಭೆ ರೀಮಾ ಲರಿಸ್ಸಾ ಡಾಯಸ್ ಸೀಸನ್​ 6 ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇವರ ತಾಯಿಯು ಶಿಕ್ಷಕಿಯಾಗಿದ್ದು, ತಂದೆಯು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರೆಯಾಗಿರುವ ಲರಿಸ್ಸಾ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಇವರು ಸಿಲಿಕಾನ್ ಸಿಟಿಯ ಖ್ಯಾತ ಕಂಪನಿಯ ಸಾಫ್ಟ್​ವೇರ್ ಉದ್ಯೋಗಿ ಕೂಡ ಹೌದು. ಅಲ್ಲದೆ ಅತ್ಯುತ್ತಮ ನೃತ್ಯಪಟುವಾಗಿದ್ದು, ಇದರೊಂದಿಗೆ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಕಾಮನರ್ ಎಂಟ್ರಿ ಮೂಲಕ ಬಿಗ್ ಬಾಸ್​ಗೆ ಕಾಲಿಡಲಿರುವ ಲರಿಸ್ಸಾ ಡಾಯಸ್ ಅವರ ಮತ್ತಷ್ಟು ಪ್ರತಿಭೆಗಳು ಬಿಬಿ ಮನೆಯಲ್ಲಿ ಅನಾವರಣಗೊಳ್ಳಲಿದೆ.ಬಿಗ್​ ಬಾಸ್ ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ವಿಶೇಷ ಕ್ಯಾರೆಕ್ಟರ್‌ಗಳ ವ್ಯಕ್ತಿಗಳನ್ನು ಆಯ್ಕೆ ಮಾಡಲು ಇಚ್ಛಿಸುತ್ತೇವೆ. ಅಂತಹ ವಿಶೇಷ ಸ್ವಭಾವ ಸೆಲೆಬ್ರಿಟಿಗಳಲ್ಲಿಯೂ ಇರಬಹುದು ಅಥವಾ ಜನ ಸಾಮಾನ್ಯರಲ್ಲೂ ಕಾಣಿಸಬಹುದು. ಹಾಗಾಗಿ ಈ ಬಾರಿಯ ಹದಿನೆಂಟೂ ಸ್ಪರ್ಧಿಗಳ ಕ್ಯಾರೆಕ್ಟರ್​ಗಳು ಬಹಳ ಇಂಟರೆಸ್ಟಿಂಗ್ ಆಗಿರುತ್ತದೆ ಎಂದು ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಹೇಳಿರುವುದರಿಂದ ಈ ಬಾರಿಯ ಬಿಗ್​ ಬಾಸ್​ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ.

Monday, October 1, 2018

ಮನುಷ್ಯ ಮನುಷ್ಯರ ನಡುವೆ ಒಂದು ಸಣ್ಣ ಅಂಶ ಎಷ್ಟು ದಿನ ಇರುತ್ತೆ ಒಂದು ಸಣ್ಣ ಕಥಾ ನಿಮಗಾಗಿ


1 ನಿಮಿಷ ಸಮಯವಿದ್ದರೆ ತಪ್ಪದೇ ಈ ಮನಮುಟ್ಟುವ ಕಥೆಯನ್ನೊಮ್ಮೆ ಓದಿ. ಶೇರ್ ಮಾಡಿ

9 ನೇ ಕ್ಲಾಸಿನಲ್ಲಿ ರಾಕಿ ಕಟ್ಟಿ ಎಲ್ಲೊ ಹೋದಳು.. ಈಗ ಬಂದು ಮಾಡಿದ್ದೇನು ಗೊತ್ತಾ?? ನಿಜಕ್ಕೂ ಕಣ್ಣೀರು ಜಾರುವ ಕತೆ.. ತಪ್ಪದೇ ಇದನ್ನೊಮ್ಮೆ ಓದಿ..

ಆ ಹುಡುಗ ರಿಕ್ಷಾ ಓಡಿಸ್ಕೊಂಡು ಜೀವನ ಸಾಗಿಸ್ತಿದ್ದ ಬಡವ.. ಒಂದು ದಿನ ಅಪಘಾತಕ್ಕೀಡಾಗಿ ಎರಡೂ ಕಾಲು ಕಳೆದುಕೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ನರಳಾಡ್ತಿದ್ದ..
ಈ ವಿಷಯ ತಿಳಿದು ದೂರದ ದೆಹಲಿಯಿಂದ ಒಂದು ಹುಡುಗಿ ಮಣಿಪಾಲ್ ಆಸ್ಪತ್ರೆಗೆ ಬಂದು ನೆರವಿಗೆ ನಿಂತಳು. ಅವಳು ಯಾರು??.. 16 ವರ್ಷದ ಹಿಂದೆ ರಾಖಿ ಕಟ್ಟಿದ ಒಂದು ಹುಡುಗಿ… ಬೆಡ್ ಮೇಲೆ ಮಲಗಿರೋ ಈತನ ಹೆಸರು ರಮಾನಂದ್.
ನಮ್ಮ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಬಳಿ ವಾಸವಿದ್ದವ ಈತ…
ಎಸ್ಎಸ್ಎಲ್​ಸಿ ಬಳಿಕ ಮುಂದೆ ಓದಲಾಗದೆ ಬಸ್ ಕ್ಲೀನರ್, ಕಂಡಕ್ಟರ್ ಆಗಿದ್ದ ರಮಾನಂದ್ ಕೊನೆಗೆ ಸಾಲ ಮಾಡಿ ಒಂದು ಆಟೋ ರಿಕ್ಷಾ ತಗೊಂಡಿದ್ದ. ನಂತರ ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ರಮಾನಂದ್​ಗೆ ಆಗಸ್ಟ್ 20ರಂದು ಕಾರ್ಕಳ ಬಳಿ ಅಪಘಾತವಾಯ್ತು… ಆಗ ಎರಡೂ ಕಾಲು ಕಳೆದುಕೊಂಡ ಅವನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈತನದ್ದು ಬಡ ಕುಟುಂಬ ಆಸ್ಪತ್ರೆ ಖರ್ಚು ನಿರ್ವಹಣೆ ಮಾಡುವುದಕ್ಕೂ ಕಷ್ಟ.. ಈ ಸಮಯದಲ್ಲಿ ರಮಾನಂದನ ಕೆಲವು ಗೆಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯಕ್ಕಾಗಿ ಪೋಸ್ಟ್​ಗಳನ್ನು ಹಾಕಿದ್ದರು.. ಬಹಳಷ್ಟು ಜನ ಇದನ್ನು ನೋಡಿ ಸಹಾಯ ಮಾಡಿದರು.
ಅಷ್ಟೇ ಅಲ್ಲ ಈ ಸಮಯದಲ್ಲಿ ಹೈಸ್ಕೂಲ್​​ನಲ್ಲಿ ರಾಖಿ ಕಟ್ಟಿದ ತಂಗಿಯೊಬ್ಬಳು ಸಹಾಯಕ್ಕೆ ಬಂದಿದ್ದು ನಿಜಕ್ಕೂ ಮಾನವೀಯತೆ ಬದುಕಿದೆ ಎಂಬುದ ತೋರುತ್ತದೆ..
ಈಕೆಯೇ ಸ್ಮಿತಾ ಸಂಪತ್. 9ನೇ ತರಗತಿಯಲ್ಲಿದ್ದಾಗ ಈಕೆ ರಮಾನಂದ್​ಗೆ ರಾಖಿ ಕಟ್ಟಿದ್ದಳು.
ಈಗ ಸುಮಾರು 16 ವರ್ಷ ಕಳೆದಿದೆ. ಈಗ ಸ್ಮಿತಾ ಮದುವೆಯಾಗಿ ದೆಹಲಿಯಲ್ಲಿದ್ದಳು. ಇವರಿಗ್ರ್ ರಮಾನಂದ್​ಗೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದಾನೆ ಎಂದು ಗೊತ್ತಾಗ್ತಿದ್ದಂಗೆ ಸ್ಮಿತಾ ದೆಹಲಿಯಿಂದ ಮಣಿಪಾಲ್​ಗೆ ಬಂದಿದ್ದಾರೆ..
ಆಸ್ಪತ್ರೆಗೆ ಹೋದ ಸ್ಮಿತಾ ರಮಾನಂದ್​ ಆರೋಗ್ಯ ವಿಚಾರಿಸಿದ್ದಾರೆ. ಸ್ಮಿತಾ ಅವರು ಆಸ್ಪತ್ರೆಯಲ್ಲೇ ಇದ್ದು ತಾನು ರಾಕಿ ಕಟ್ಟಿದ ಅಣ್ಣನ ಯೋಗಕ್ಷೇಮ ವಿಚಾರಿಸಿ… ತನ್ನ ಕೈಲಾದ ಆರ್ಥಿಕ ಸಹಾಯ ಮಾಡಿದ್ದಾಳೆ.. ಅಷ್ಟಕ್ಕೇ ಸುಮ್ಮನಾಗದ ಸ್ಮಿತ.. ತನ್ನ ಗೆಳೆಯರನ್ನೆಲ್ಲ ಸಂಪರ್ಕಿಸಿ ಹಣ ಸಂಗ್ರಹಿಸಿ ರಮಾನಂದ್​ನ ಆಸ್ಪತ್ರೆ ವೆಚ್ಚ ಭರಿಸಲು ನೆರವಾದಳು. ಇವರೆಲ್ಲ ಸೇರಿಕೊಂಡು ಈಗಾಗಲೇ ಸುಮಾರು ಎರಡೂವರೆ ಲಕ್ಷ ರೂ. ಹಣ ಸಂಗ್ರಹಿಸಿ ರಮಾನಂದ್ ಕುಟುಂಬಕ್ಕೆ ನೀಡಿದ್ದಾರೆ.
ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರಮಾನಂದ್ ನಡೆಯಲು ಆಗುವುದಿಲ್ಲ.. ಹಾಸಿಗೆ ಮೇಲೆ ದಿನ ಕಳೆಯುತ್ತಿದ್ದಾರೆ… ಆದರೆ ಸ್ಮಿತಾ ಮಾತ್ರ ತಾನು ಮಾಡಿದ ಸಹಾಯದ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಸ್ಮಿತಾಳ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿದ್ದರಿಂದ ವಿಚಾರ ತಿಳಿದುಬಂದಿದೆ…
ಸಣ್ಣ ವಿಚಾರಕ್ಕಾಗಿ.. ಜಗಳ ಆಡುವ ಅದೆಷ್ಟೋ ಜನ ಸಹೋದರ ಸಹೋದರಿ.. ಸ್ನೇಹಿತರಿಗೆ.. ಸ್ಮಿತ ನಿಜಕ್ಕೂ ಮಾದರಿಯಾಗಿ ನಿಂತಿದ್ದಾರೆ.. ಇವರಿಗೊಣ್ದು ಹ್ಯಾಟ್ಸ್ ಆಫ್..
      ಪುನೀತ್.⚘