ಕನ್ನಡದ
ಬಿಗ್ ಬಾಸ್ ಹೊಸ ಸೀಸನ್ ಭಾನುವಾರದಿಂದ ಪ್ರಾರಂಭವಾಗಲಿದೆ. ಕಾರ್ಯಕ್ರಮಕ್ಕೆ ಕಿಚ್ಚು ಹಚ್ಚಲು ಕಿಚ್ಚ ಸುದೀಪ್ ಕೂಡ ಸಕಲ ಸಿದ್ಧತೆಯಲ್ಲಿದ್ದಾರೆ. ಇದರ ಬೆನ್ನಲ್ಲೇ ಈ ಬಾರಿಯ ಸ್ಪರ್ಧಿಗಳ ಕುರಿತು ಭಾರೀ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಬಿಗ್ ಬಾಸ್ನ ಸೀಸನ್ 5 ನಲ್ಲಿ ಸಾಮಾನ್ಯ ಜನರಿಗೂ ಅವಕಾಶ ನೀಡುವ ಪರಿಪಾಠ ಆರಂಭವಾಗಿತ್ತು. ಅದರಂತೆ ಈ ಬಾರಿ ಅರ್ಧದಷ್ಟು ಸರ್ಧಿಗಳು ಜನಸಾಮಾನ್ಯರಾಗಲಿದ್ದಾರೆ ಎಂಬ ಮಾಹಿತಿಗಳು ಹೀಗಾಗಲೇ ಹೊರಬಿದ್ದಿದೆ.
ಅದರಲ್ಲೂ ಒಂದಷ್ಟು ಸೆಲೆಬ್ರಿಟಿಗಳ ಹೆಸರುಗಳು ಬಹಿರಂಗವಾಗಿದ್ದರೂ, ಇಲ್ಲಿ ಜನ ಸಾಮಾನ್ಯ ಕೋಟಾದಲ್ಲಿ ಯಾರೂ ಎಂಟ್ರಿ ಗಿಟ್ಟಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಎಲ್ಲೂ ಹೊರ ಬಿದ್ದಿರಲಿಲ್ಲ. ಇದೀಗ ಕೆಲ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಕರಾವಳಿ ಬೆಡಗಿಯೊಬ್ಬಳ ಬಿಗ್ ಬಾಸ್ ಎಂಟ್ರಿ ಪಕ್ಕಾ ಎನ್ನಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಪ್ರತಿಭೆ ರೀಮಾ ಲರಿಸ್ಸಾ ಡಾಯಸ್ ಸೀಸನ್ 6 ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇವರ ತಾಯಿಯು ಶಿಕ್ಷಕಿಯಾಗಿದ್ದು, ತಂದೆಯು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರೆಯಾಗಿರುವ ಲರಿಸ್ಸಾ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಇವರು ಸಿಲಿಕಾನ್ ಸಿಟಿಯ ಖ್ಯಾತ ಕಂಪನಿಯ ಸಾಫ್ಟ್ವೇರ್ ಉದ್ಯೋಗಿ ಕೂಡ ಹೌದು. ಅಲ್ಲದೆ ಅತ್ಯುತ್ತಮ ನೃತ್ಯಪಟುವಾಗಿದ್ದು, ಇದರೊಂದಿಗೆ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ
ಕಾಮನರ್ ಎಂಟ್ರಿ ಮೂಲಕ ಬಿಗ್ ಬಾಸ್ಗೆ ಕಾಲಿಡಲಿರುವ ಲರಿಸ್ಸಾ ಡಾಯಸ್ ಅವರ ಮತ್ತಷ್ಟು ಪ್ರತಿಭೆಗಳು ಬಿಬಿ ಮನೆಯಲ್ಲಿ ಅನಾವರಣಗೊಳ್ಳಲಿದೆ.

ಬಿಗ್ ಬಾಸ್ ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ವಿಶೇಷ ಕ್ಯಾರೆಕ್ಟರ್‌ಗಳ ವ್ಯಕ್ತಿಗಳನ್ನು ಆಯ್ಕೆ ಮಾಡಲು ಇಚ್ಛಿಸುತ್ತೇವೆ. ಅಂತಹ ವಿಶೇಷ ಸ್ವಭಾವ ಸೆಲೆಬ್ರಿಟಿಗಳಲ್ಲಿಯೂ ಇರಬಹುದು ಅಥವಾ ಜನ ಸಾಮಾನ್ಯರಲ್ಲೂ ಕಾಣಿಸಬಹುದು. ಹಾಗಾಗಿ ಈ ಬಾರಿಯ ಹದಿನೆಂಟೂ ಸ್ಪರ್ಧಿಗಳ ಕ್ಯಾರೆಕ್ಟರ್ಗಳು ಬಹಳ ಇಂಟರೆಸ್ಟಿಂಗ್ ಆಗಿರುತ್ತದೆ ಎಂದು ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಹೇಳಿರುವುದರಿಂದ ಈ ಬಾರಿಯ ಬಿಗ್ ಬಾಸ್ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ.
No comments:
Post a Comment