ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಮೈಲುಗಲ್ಲು ಸಾಧಿಸುವ ನಿಟ್ಟಿನಲ್ಲಿ ಪ್ಯಾನ್ ಇಂಡಿಯಾ ಚಿತ್ರ ಕಬ್ಜ ಈಗಾಗಲೇ ತನ್ನ ಭಾಗದ ಶೂಟಿಂಗ್ ಮುಗಿಸಿಕೊಂಡು ಅಭಿಮಾನಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸುವಂತೆ ಮಾಡಿದೆ. ಮತ್ತು ಕಬ್ಜ ಚಿತ್ರದ ನಿರ್ದೇಶಕ ಆರ್ ಚಂದ್ರು ಅವರು ಕೂಡ ಸಕ್ಕತ್ತಾಗಿ ತಮ್ಮ ನಿರ್ದೇಶನ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಲು ಸಜ್ಜಾಗಿದ್ದಾರೆ. ಹಾಗೇನೆ ಈ ಚಿತ್ರ ಕೂಡ ಕನ್ನಡದ ಇನ್ನೊಂದು ಯಶಸ್ವಿ ಚಿತ್ರ ಆಗುವುದರಲ್ಲಿ ಎರಡು ಮಾತಿಲ್ಲ, ಯಾಕೆಂದರೆ ಇಲ್ಲಿಯವರೆಗೂ ಯಾರೂ ಮಾಡದ ರೀತಿ ಸಿನಿಮಾ ಮೂಡಿ ಬರಲಿದೆಯಂತೆ.
ಕನ್ನಡದ ಕೆಜಿಎಫ್ ರೀತಿಯೇ ಈ ಕಬ್ಜ ಸಿನಿಮಾ ಕೂಡ ಸೌಂಡ್ ಮಾಡುವುದು ಪಕ್ಕಾ ಆಗಿದೆ, ಹಾಗೆ ನಾಯಕ ನಟ ರಿಯಲ್ ಸ್ಟಾರ್ ಉಪೇಂದ್ರರವರು ಕೂಡ, ಈ ಕಬ್ಜ ಸಿನಿಮಾದಲ್ಲಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದು, ಅಂಡರ್ವರ್ಲ್ಡ್ ಹೇಗಿರಲಿದೆ ಎಂಬುದಾಗಿ ತೋರಿಸಲು ಸಜ್ಜಾಗಿದ್ದಾರಂತೆ. ಮತ್ತು ಅಭಿಮಾನಿಗಳು ಕಾತುರದಿಂದ ಕಾಯುವ ಹಾಗೆ ಈ ಚಿತ್ರದ ಕೆಲ ಸ್ಟಿಲ್ಸ್ ಗಳು ಮತ್ತು ಶೂಟಿಂಗ್ ಸ್ಪಾಟ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಕೂಡ ಆಗಿವೆ.
ಹಾಗೇನೇ ಚಿತ್ರತಂಡ ಇದೇ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ 14-01- 2021 ಕ್ಕೆ, ಹೊಸ ಸರ್ಪ್ರೈಸ್ ಸುದ್ದಿ ನೀಡಲಿದ್ದು, ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಈ ಕಬ್ಜ ಚಿತ್ರತಂಡ ಯಾವ ಸುದ್ದಿ ಹೇಳಬಹುದು ಎಂಬುದು ನಿಮಗೂ ತಿಳಿದಿದ್ದರೆ ತಪ್ಪದೇ ಶೇರ್ ಮಾಡಿ, ಕಮೆಂಟ್ ಮಾಡಿ, ಕಬ್ಜ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭಾಶಯ ತಿಳಿಸಿ ಧನ್ಯವಾದಗಳು...




No comments:
Post a Comment