Wednesday, January 13, 2021

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಕಬ್ಜಕ್ಕೆ ಸುದೀಪ್ ಆಗಮನ..! ಇನ್ನಷ್ಟು ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ

ಹೌದು ಕೆಜಿಎಫ್ ನಂತರ ಮತ್ತೊಂದು ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರವಾದ ಕಬ್ಜಾ ಸಿನಿಮಾ ಈಗಾಗಲೇ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಸುದ್ದಿ ಆಗಿದ್ದು, ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ. ದಿನೇದಿನೇ ಕಬ್ಜಾ ಚಿತ್ರತಂಡದ ಮೇಲೆ ಮತ್ತು ಕಬ್ಜಾ ಸಿನಿಮಾದ ಮೇಲೆ ಪ್ರೀತಿ ಹೆಚ್ಚಾಗುತ್ತಿದ್ದು, ಕಬ್ಜಾ ಸಿನಿಮಾ ಹೀಗೆ ಮೂಡಿಬರಲಿದೆ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಕಬ್ಜಾ ಚಿತ್ರತಂಡವೂ ಇದೇ ಸಂಕ್ರಾಂತಿ ಹಬ್ಬಕ್ಕೆ ಹೊಸ ಸರ್ಪ್ರೈಸ್ ಸುದ್ದಿಯೊಂದನ್ನು ನೀಡುತ್ತಿದ್ದೇವೆ ಎಂದು ಹೇಳಿಕೊಂಡಿತ್ತು.

ಅದೇ ರೀತಿ ಇದೀಗ ಕಬ್ಜಾ ಅಂಕಣಕ್ಕೆ ನಮ್ಮ ಕಿಚ್ಚ ಸುದೀಪ್ ಅವರು ಗೇಮ್ ನಲ್ಲಿ ಇರುವುದಾಗಿ ತಿಳಿದು ಬಂದಿದೆ. ಹಾಗೆ ಈ ವಿಚಾರ ತಿಳಿದು ಕಿಚ್ಚನ ಫ್ಯಾನ್ಸ್ ಗಳು ಫುಲ್ ಫಿದಾ ಆಗಿದ್ದಾರೆ. ಹಾಗೆ ಕಬ್ಜಾ ಸಿನಿಮಾದ ನಿರ್ದೇಶಕ ಆರ್ ಚಂದ್ರು ಅವರ ಕೈಚಳಕ ಸಿನಿಮಾದಲ್ಲಿ ಹೇಗಿರಲಿದೆ ಎಂದು ಅಭಿಮಾನಿಗಳು ಈಗಲೇ ಲೆಕ್ಕ ಹಾಕುತ್ತಿದ್ದಾರೆ. ಹೌದು ಭಾರತದ್ಯಾಂತ ಕೆಜಿಎಫ್ ಚಿತ್ರವು ಹೇಗೆ ಯಶಸ್ವಿಯಾಯಿತೋ, ಅದೇ ನಿಟ್ಟಿನಲ್ಲಿ ಇದೀಗ ರೆಟ್ರೋ ಸ್ಟೈಲಲ್ಲಿ ಸುದೀಪ್ ಎಂಟ್ರಿಯಾಗಿದ್ದು ಭಾರ್ಗವ ಭಕ್ಷಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ. ಹಾಗೇನೆ ನೀವು ಕೂಡ ಪ್ಯಾನ್ ಇಂಡಿಯಾ ಕಬ್ಜಾ ಸಿನಿಮಾಕ್ಕೆ ಕಾಯುತ್ತಿದ್ದರೆ ತಪ್ಪದೇ ಶೇರ್ ಮಾಡಿ, ಮತ್ತು ಇಂದು ಕಬ್ಜ ಚಿತ್ರತಂಡ ಬಿಡುಗಡೆ ಮಾಡಿರುವ ನ್ಯೂ ಪೋಸ್ಟರ್ ಲುಕ್ ಹೇಗಿದೆ ಎಂದು ನಮ್ಮ ಕಾಮೆಂಟ್ ಬಾಕ್ಸ್ ಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು....

No comments:

Post a Comment