ಹೌದು ಸ್ನೇಹಿತರೆ ಪಾಂಡವಪುರ ತಾಲೂಕಿನ ಚಿನಕುರಳಿ ಎಂಬ ಗ್ರಾಮದ ಪಕ್ಕ ಕುಂಬಾರಕೊಪ್ಪಲು ಎಂಬ ಸಣ್ಣ ಹಳ್ಳಿಯಲಿ ಬಡಕುಟುಂಬದಲ್ಲಿ ಹುಟ್ಟಿದ ಉಮೇಶ್ ಅವರು, ಸಣ್ಣ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಸಮಸ್ಯೆ ಎದುರಿಸಿದರು. ಎಂಟು ವರ್ಷದ ಹಿಂದೆ ಬೆಂಗಳೂರಿಗೆ ಮುಖಮಾಡಿದ ಈ ಕುಟುಂಬ, ಉಮೇಶ್ ಅವರಿಗಿದ್ದ ಕಲಾ ಆಸಕ್ತಿ, ಸಾಕಷ್ಟು ಕಷ್ಟದ ಕೆಲಸಗಳನ್ನೆಲ್ಲ ಮಾಡಿಸಿ ಬಿಟ್ಟಿತು. ಹೌದು ಉಮೇಶ್ ಅವರು ಶಾಲಾ ಕಾಲೇಜು ದಿನಗಳಲ್ಲೇ ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದು, ನಾಟಕದಲ್ಲಿ ಸಹ ಅಭಿನಯಿಸುತ್ತಿದ್ದರಂತೆ.
ಹೀಗೆ ಸಾಕಷ್ಟು ಆಸಕ್ತಿಯನ್ನು ಹೊಂದಿದ್ದರು ಉಮೇಶ್ ಅವರು. ಮತ್ತು ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲೇಬೇಕು, ತಾನು ದೊಡ್ಡ ಸ್ಟಾರ್ ನಟನಾಗಬೇಕು ಎನ್ನುವ ಅಭಿಲಾಷ ಕನಸನ್ನು ಹೊತ್ತು, ಈಗಲೂ ಸಹ ಸಿನಿಮಾರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಸಾಕಷ್ಟು ಕಷ್ಟ ಪಡುತ್ತಿದ್ದಾರೆ ಎನ್ನಲಾಗಿದೆ. ಹಾಗೆ ಉಮೇಶ್ ಅವರು ಆರಂಭದ ಹಂತದಲ್ಲಿ ಥಿಯೇಟರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ಸಿನಿಮಾ ರಂಗದಲ್ಲಿ ನೆಲೆಯೂರುವ ಉದ್ದೇಶದಿಂದ ಕನ್ನಡ ಸಿನಿಮಾಗಳನ್ನು ಪ್ರಮೋಷನ್ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.
ತದನಂತರ ತಮ್ಮದೇ ಆದ ಆನ್ಲೈನ್ ಪ್ರಮೋಷನ್ ಸಂಸ್ಥೆಯನ್ನು ಕೂಡ ಸ್ಥಾಪಿಸಿ ಕೊಳ್ಳುತ್ತಾರೆ ಉಮೇಶ್. ಹೌದು ಆನ್ಲೈನ್ ಪ್ರಚಾರಕರ್ತರಾದ ಉಮೇಶ್ ಅವರು ಸದ್ಯ ನೂರಕ್ಕಿಂತ ಹೆಚ್ಚು ಸಿನಿಮಾಗಳನ್ನು ಪ್ರಮೋಷನ್ ಮಾಡಿಕೊಟ್ಟಿದ್ದಾರೆ, ಹಾಗೇ ದೊಡ್ಡ ದೊಡ್ಡ ಸಿನಿಮಾಗಳನ್ನು ಕೂಡ ಇವರೇ ಪ್ರಮೋಷನ್ ಮಾಡಲಿದ್ದಾರೆ. ಇಂದು ಯುವ ಕಲಾವಿದ ಉಮೇಶ್ ಅವರ ಹುಟ್ಟುಹಬ್ಬದ ದಿನ, ಹಾಗಾಗಿ ನೀವು ಕೂಡ ಈ ಯುವ ಕಲಾವಿದನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ. ಸಿನಿಮಾರಂಗದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂದು ಆಶಿಸಿ ಕಾಮೆಂಟ್ ಮಾಡಿ ತಿಳಿಸಿ. ಜೊತೆಗೆ ಇನ್ನೇನು ಹೊಸ ಸಿನಿಮಾದ ಹೀರೋ ಆಗಿ ಲಾಂಚ್ ಆಗ್ತಿದ್ದಾರೆ ಉಮೇಶ್ ಅವರು, ಮತ್ತು ಎಲ್ಲರ ಆಶಯ ಕೂಡ ಇದಾಗಿದೆ ಉಮೇಶ್ ಅವರಿಗೆ ಒಳ್ಳೆಯದಾಗಲಿ. ಧನ್ಯವಾದಗಳು.....











ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಯುವ ಪ್ರತಿಭೆ ರೀಮಾ ಲರಿಸ್ಸಾ ಡಾಯಸ್ ಸೀಸನ್ 6 ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇವರ ತಾಯಿಯು ಶಿಕ್ಷಕಿಯಾಗಿದ್ದು, ತಂದೆಯು ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರೆಯಾಗಿರುವ ಲರಿಸ್ಸಾ ಸದ್ಯ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಇವರು ಸಿಲಿಕಾನ್ ಸಿಟಿಯ ಖ್ಯಾತ ಕಂಪನಿಯ ಸಾಫ್ಟ್ವೇರ್ ಉದ್ಯೋಗಿ ಕೂಡ ಹೌದು. ಅಲ್ಲದೆ ಅತ್ಯುತ್ತಮ ನೃತ್ಯಪಟುವಾಗಿದ್ದು, ಇದರೊಂದಿಗೆ ಸಂಗೀತದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ
ಬಿಗ್ ಬಾಸ್ ಶೋಗೆ ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ವಿಶೇಷ ಕ್ಯಾರೆಕ್ಟರ್‌ಗಳ ವ್ಯಕ್ತಿಗಳನ್ನು ಆಯ್ಕೆ ಮಾಡಲು ಇಚ್ಛಿಸುತ್ತೇವೆ. ಅಂತಹ ವಿಶೇಷ ಸ್ವಭಾವ ಸೆಲೆಬ್ರಿಟಿಗಳಲ್ಲಿಯೂ ಇರಬಹುದು ಅಥವಾ ಜನ ಸಾಮಾನ್ಯರಲ್ಲೂ ಕಾಣಿಸಬಹುದು. ಹಾಗಾಗಿ ಈ ಬಾರಿಯ ಹದಿನೆಂಟೂ ಸ್ಪರ್ಧಿಗಳ ಕ್ಯಾರೆಕ್ಟರ್ಗಳು ಬಹಳ ಇಂಟರೆಸ್ಟಿಂಗ್ ಆಗಿರುತ್ತದೆ ಎಂದು ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್ ಹೇಳಿರುವುದರಿಂದ ಈ ಬಾರಿಯ ಬಿಗ್ ಬಾಸ್ ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ.












