1 ನಿಮಿಷ ಸಮಯವಿದ್ದರೆ ತಪ್ಪದೇ ಈ ಮನಮುಟ್ಟುವ ಕಥೆಯನ್ನೊಮ್ಮೆ ಓದಿ. ಶೇರ್ ಮಾಡಿ
9 ನೇ ಕ್ಲಾಸಿನಲ್ಲಿ ರಾಕಿ ಕಟ್ಟಿ ಎಲ್ಲೊ ಹೋದಳು.. ಈಗ ಬಂದು ಮಾಡಿದ್ದೇನು ಗೊತ್ತಾ?? ನಿಜಕ್ಕೂ ಕಣ್ಣೀರು ಜಾರುವ ಕತೆ.. ತಪ್ಪದೇ ಇದನ್ನೊಮ್ಮೆ ಓದಿ..
ಆ ಹುಡುಗ ರಿಕ್ಷಾ ಓಡಿಸ್ಕೊಂಡು ಜೀವನ ಸಾಗಿಸ್ತಿದ್ದ ಬಡವ.. ಒಂದು ದಿನ ಅಪಘಾತಕ್ಕೀಡಾಗಿ ಎರಡೂ ಕಾಲು ಕಳೆದುಕೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ನರಳಾಡ್ತಿದ್ದ..
ಈ ವಿಷಯ ತಿಳಿದು ದೂರದ ದೆಹಲಿಯಿಂದ ಒಂದು ಹುಡುಗಿ ಮಣಿಪಾಲ್ ಆಸ್ಪತ್ರೆಗೆ ಬಂದು ನೆರವಿಗೆ ನಿಂತಳು. ಅವಳು ಯಾರು??.. 16 ವರ್ಷದ ಹಿಂದೆ ರಾಖಿ ಕಟ್ಟಿದ ಒಂದು ಹುಡುಗಿ… ಬೆಡ್ ಮೇಲೆ ಮಲಗಿರೋ ಈತನ ಹೆಸರು ರಮಾನಂದ್.
ನಮ್ಮ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಬಳಿ ವಾಸವಿದ್ದವ ಈತ…
ಎಸ್ಎಸ್ಎಲ್ಸಿ ಬಳಿಕ ಮುಂದೆ ಓದಲಾಗದೆ ಬಸ್ ಕ್ಲೀನರ್, ಕಂಡಕ್ಟರ್ ಆಗಿದ್ದ ರಮಾನಂದ್ ಕೊನೆಗೆ ಸಾಲ ಮಾಡಿ ಒಂದು ಆಟೋ ರಿಕ್ಷಾ ತಗೊಂಡಿದ್ದ. ನಂತರ ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ರಮಾನಂದ್ಗೆ ಆಗಸ್ಟ್ 20ರಂದು ಕಾರ್ಕಳ ಬಳಿ ಅಪಘಾತವಾಯ್ತು… ಆಗ ಎರಡೂ ಕಾಲು ಕಳೆದುಕೊಂಡ ಅವನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಈತನದ್ದು ಬಡ ಕುಟುಂಬ ಆಸ್ಪತ್ರೆ ಖರ್ಚು ನಿರ್ವಹಣೆ ಮಾಡುವುದಕ್ಕೂ ಕಷ್ಟ.. ಈ ಸಮಯದಲ್ಲಿ ರಮಾನಂದನ ಕೆಲವು ಗೆಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯಕ್ಕಾಗಿ ಪೋಸ್ಟ್ಗಳನ್ನು ಹಾಕಿದ್ದರು.. ಬಹಳಷ್ಟು ಜನ ಇದನ್ನು ನೋಡಿ ಸಹಾಯ ಮಾಡಿದರು.
ಅಷ್ಟೇ ಅಲ್ಲ ಈ ಸಮಯದಲ್ಲಿ ಹೈಸ್ಕೂಲ್ನಲ್ಲಿ ರಾಖಿ ಕಟ್ಟಿದ ತಂಗಿಯೊಬ್ಬಳು ಸಹಾಯಕ್ಕೆ ಬಂದಿದ್ದು ನಿಜಕ್ಕೂ ಮಾನವೀಯತೆ ಬದುಕಿದೆ ಎಂಬುದ ತೋರುತ್ತದೆ..
ಈಕೆಯೇ ಸ್ಮಿತಾ ಸಂಪತ್. 9ನೇ ತರಗತಿಯಲ್ಲಿದ್ದಾಗ ಈಕೆ ರಮಾನಂದ್ಗೆ ರಾಖಿ ಕಟ್ಟಿದ್ದಳು.
ಈಗ ಸುಮಾರು 16 ವರ್ಷ ಕಳೆದಿದೆ. ಈಗ ಸ್ಮಿತಾ ಮದುವೆಯಾಗಿ ದೆಹಲಿಯಲ್ಲಿದ್ದಳು. ಇವರಿಗ್ರ್ ರಮಾನಂದ್ಗೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದಾನೆ ಎಂದು ಗೊತ್ತಾಗ್ತಿದ್ದಂಗೆ ಸ್ಮಿತಾ ದೆಹಲಿಯಿಂದ ಮಣಿಪಾಲ್ಗೆ ಬಂದಿದ್ದಾರೆ..
ಆಸ್ಪತ್ರೆಗೆ ಹೋದ ಸ್ಮಿತಾ ರಮಾನಂದ್ ಆರೋಗ್ಯ ವಿಚಾರಿಸಿದ್ದಾರೆ. ಸ್ಮಿತಾ ಅವರು ಆಸ್ಪತ್ರೆಯಲ್ಲೇ ಇದ್ದು ತಾನು ರಾಕಿ ಕಟ್ಟಿದ ಅಣ್ಣನ ಯೋಗಕ್ಷೇಮ ವಿಚಾರಿಸಿ… ತನ್ನ ಕೈಲಾದ ಆರ್ಥಿಕ ಸಹಾಯ ಮಾಡಿದ್ದಾಳೆ.. ಅಷ್ಟಕ್ಕೇ ಸುಮ್ಮನಾಗದ ಸ್ಮಿತ.. ತನ್ನ ಗೆಳೆಯರನ್ನೆಲ್ಲ ಸಂಪರ್ಕಿಸಿ ಹಣ ಸಂಗ್ರಹಿಸಿ ರಮಾನಂದ್ನ ಆಸ್ಪತ್ರೆ ವೆಚ್ಚ ಭರಿಸಲು ನೆರವಾದಳು. ಇವರೆಲ್ಲ ಸೇರಿಕೊಂಡು ಈಗಾಗಲೇ ಸುಮಾರು ಎರಡೂವರೆ ಲಕ್ಷ ರೂ. ಹಣ ಸಂಗ್ರಹಿಸಿ ರಮಾನಂದ್ ಕುಟುಂಬಕ್ಕೆ ನೀಡಿದ್ದಾರೆ.
ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರಮಾನಂದ್ ನಡೆಯಲು ಆಗುವುದಿಲ್ಲ.. ಹಾಸಿಗೆ ಮೇಲೆ ದಿನ ಕಳೆಯುತ್ತಿದ್ದಾರೆ… ಆದರೆ ಸ್ಮಿತಾ ಮಾತ್ರ ತಾನು ಮಾಡಿದ ಸಹಾಯದ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಸ್ಮಿತಾಳ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿದ್ದರಿಂದ ವಿಚಾರ ತಿಳಿದುಬಂದಿದೆ…
ಸಣ್ಣ ವಿಚಾರಕ್ಕಾಗಿ.. ಜಗಳ ಆಡುವ ಅದೆಷ್ಟೋ ಜನ ಸಹೋದರ ಸಹೋದರಿ.. ಸ್ನೇಹಿತರಿಗೆ.. ಸ್ಮಿತ ನಿಜಕ್ಕೂ ಮಾದರಿಯಾಗಿ ನಿಂತಿದ್ದಾರೆ.. ಇವರಿಗೊಣ್ದು ಹ್ಯಾಟ್ಸ್ ಆಫ್..
ಪುನೀತ್.⚘